Wednesday, August 5, 2020

Friday, May 22, 2020


  ನಮ್ಮೇಲ್ಲರಿಗೂ(ವಿಶ್ವನಾಥ)ಸೊದರಮಾವನೆಂದರೆ ಬಹಳ ಇಷ್ಠ




                            
    ತಾಯಿ ಸತ್ತರು ಸೊದರಮಾವನಿರಬೇಕು ಎಂಬ ಲೊಕಾನುಭವದ ಮಾತು ಇದೆ. ಈ ಮಾತನ್ನು ಹಲವು    ಸೋದರಮಾವಂದಿರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದರ ಮೂಲಕ     ಪಾಲಿಸಿಕೊಂಡು ಬಂದಿದ್ದಾರೆ.   ಅವ್ವನ ಮನೆ(ತವರುಮನೆ)ಯ ಸೋದರಮಾವನೆಂದರೆ ಅಳಿಯಂದಿರರಿಗೆ ಒಂದಿಷ್ಠು ಪ್ರೀತಿ, ಒಂದಿಷ್ಠು ಸ್ವತಂತ್ರ  ಒಂದಿಷ್ಠು  ಸವಲತ್ತು, ಸ್ನೇಹ, ಸಲುಗೆ  ಸಿಗುವ ಗೌರವಾದರದ ಸ್ಥಳವಾಗಿರುತ್ತದೆ.

     ನಮಗೂ ಒಬ್ಬ ಸೋದರಮಾವನು ಇದ್ದನು. ವಿಶ್ವನಾಥ್ ಬೆಲ್ಲದ.ವೃತ್ತಿಯಿಂದ ಶಿಕ್ಷಕರು, ಪ್ರ ಪ್ರವೃತ್ತಿಯಿಂದ ಒಬ್ಬ ಸ್ನೇಹಜೀವಿ,ಸಂಘಜೀವಿ ಹಾಗೂ ಕೌಟುಂಬಿಕ ಸಂಭಂದಗಳನ್ನು ಉತ್ತಮವಾಗಿ  ನಿಭಾಯಿಸಿಕೊಂಡು ಬಂದಂತಹ  ಒಬ್ಬ ಜವಾದ್ಭಾರಿಯುತ ವ್ಯಕ್ತಿಯಾದ್ದರು. ಪತ್ರಿಕೆ, ಪುಸ್ತಕಗಳನ್ನು ಕೊಂಡುಕೊಳ್ಳುವುದು  ಅವುಗಳನ್ನು ಓದುವ ಬಲವಾದ ಹವ್ಯಾಸ ಇರುವ ವ್ಯಕ್ತಿಯಾಗಿದ್ದರು.

         ನನ್ನ ನನ್ನ ಬಾಲ್ಯದ ಜೀವನ ಆರು ವರ್ಷಗಳ ಕಾಲ ಕೊಪ್ಪಳ ಜಿಲ್ಲೆ ಬಿಸರಹಳ್ಳಿಯೆಂಬ ಹಳ್ಳಿಯಲ್ಲಿ ಆಯಿತು. ನಮ್ಮ ಹೆಣ್ಣಜ್ಜ ಶ್ರಿ ಸಿದ್ದಪ್ಪಜ್ಜ ಕೂಡಾ ಶಿಕ್ಷಕರಾಗಿದ್ದರು. ಅವರಿಗೆ ಮೂರು ಗಂಡು ಮಕ್ಕಳು.ಐದು ಜನ ಹೆಣ್ಣು ಮಕ್ಕಳು. ನನ್ನ  ಗಂಡಜ್ಜನ  ತಂಗಿಯೇ  ನಮ್ಮ ಹೆಣ್ಣಜ್ಜಿಯಾಗಿದ್ದಳು. ತುಂಬು ಕುಟುಂಬ, ಒಂದು ರೈಲ್ವೆ ಬೋಗಿಯಂತಿರುವ ಮನೆ ,ಮನೆಯಲ್ಲಿ ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು.  ಒಂದು ಹಳೆಯ ಮನೆ ಮನೆ ತುಂಬಾ ಜನರು ಜನರು ಇರುತ್ತಿದ್ದರು.  ಜನರ ನಡುವೆ ಬಹಳಷ್ಟು ಹೊಂದಾಣಿಕೆ ಸ್ವಭಾವವಿತ್ತು.ನನ್ನ ಬಾಲ್ಯದ  ಆರು ವರ್ಷಗಳು ಬಿಸರಳ್ಳಿ  ಎಂಬ ಊರಿನಲ್ಲಿ ಉದ್ದನೆಯ ಮನೆಯಲ್ಲಿ ನಡೆಯಿತು. ಬಾಲ್ಯದಲ್ಲಿ ನಾನು ತೋಟಕ್ಕೆ ಹೋಗಿ ಬರುತ್ತಿದ್ದೆ. ತೋಟದಲ್ಲಿ  ಅಜ್ಜನ ಜೊತೆ ಮೊಟರ್ ಮನೆಯಲ್ಲಿ ಊಟ ಮಾಡುತ್ತಿದ್ದೇನು. ಬಾವಿಯಲ್ಲಿ ಇರುವುದು ಕಡಿದಾದ, ಆಳವಾದ ಹತ್ತುವುದೇ ಅದೊಂದು ಸಾಹಸದ ಕೆಲಸವಾಗಿತ್ತು. ದಿನಗಳಲ್ಲಿ ಹೊಲಕ್ಕೆಕ್ಕೆ ಹೋದರೆ ರೇಷ್ಮೆ ಗಿಡಗಳ ಕೆಂಪಾದ ಹಣ್ಣನ್ನು ತಿನ್ನುವುದು,ಆ ಹಣ್ಣುಗಳನ್ನು ಜೇಬಿನಲ್ಲಿ ಹಾಕಿಕೊಂಡು ಜೇಬು ಕೆಂಪು ಮಾಡಿಕೊಳ್ಳುವ ಪ್ರಸಂಗ ಇಂದಿಗೂ ನೆನಪಿಗೆ ಬರುತ್ತದೆ.

     ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ನಾನು, ನನ್ನ ಅಣ್ಣ, ನನ್ನ ತಮ್ಮ  ಬೇರೆಬೇರೆ  ಊರು ಹಾಗೂ ಪರಿಸರದಲ್ಲಿ ಶಿಕ್ಷಣ ಕಲಿತು ದೊಡ್ಡವರಾಗುವ ಪ್ರಸಂಗ ಬಂದಿತು. ನನ್ನ ಬಾಲ್ಯಜೀವನ ನನಗೆ ಅಷ್ಟೊಂದು ಸಂತಸವನ್ನು ತಂದಿರಲಿಲ್ಲ.ಎಂಬ ಭಾವನೆ ಮನಸಿನಲ್ಲಿಯೆನೋ ಇದೆ. ಮನೆಯಲ್ಲಿ ಸುಶಿಕ್ಷಿತ ರು ಇದ್ದರು  ಕಲಿಸಲು  ಬಹಳ ಇಷ್ಟಪಡುತ್ತಿದ್ದರು. ಬಳಪದ ಮೂಲಕ ಪಾಟಿಯಲ್ಲಿ ಹಾಕಿಕೊಟ್ಟು  ತೀಡಲು  ಹೇಳುತ್ತಿದ್ದರು. ಅವರು ಹಾಕಿಕೊಟ್ಟ   ಸಣ್ಣಪುಟ್ಟ ಅಕ್ಷರಗಳೇ ನನಗೆ ಕಠಿಣ ವೆನಿಸುತ್ತಿದ್ದವು.

     ಊರಿನ ದ್ಯಾವಮ್ಮನ ಗುಡಿಯಲ್ಲಿ ಪ್ರತಿರಾತ್ರಿ  ಟ್ಯೂಶನ್ ಇರುತ್ತಿತ್ತು. ಪಾಠ ಹೇಳುವ  ಮಾಸ್ತರನ ಹೆಸರು ನೆನಪಿಲ್ಲ. ಮಾಸ್ತರ ಬಹಳ ಸಿಡುಕಿನ ಮನುಷ್ಯನಾಗಿದ್ದನು.ಅವರು  ದಿನಾಲು ಬೈದು,ಬಡಿದು ಕಲಿಸುವ ಕೆಲಸ ಮಾಡುತ್ತಿದ್ದರು. ಅವರ ಬಗ್ಗೆ ಬಹಳ ಭಯ ಇದುದ್ದರಿಂದ ರಾತ್ರಿಯ ಸಮಯದಲ್ಲಿ ಗಾಂಧಿ ಕಟ್ಟೆಯ ಮೇಲೆ ಹೋಗಿ ಮಲಗಿ ಕೊಳ್ಳುತ್ತಿದ್ದೇನು. ನನ್ನ ಚಿಕ್ಕಮ್ಮಂದಿರು ನನ್ನನ್ನು ಕರೆದುಕೊಂಡು ಬರುತ್ತಿದ್ದರು. ಬಾಲ್ಯದಲ್ಲಿ ಗಾಂಧಿ ಪಕ್ಕದಲ್ಲಿ ಮಲಗಿ ಕೊಂಡಿರುವುದರಿಂದ  ನನ್ನ ವಯಕ್ತಿಕ ಜೀವನದ ಮೇಲೆ ಗಾಂಧಿಜಿಯವರ ಪ್ರಭಾವ  ಬಹಳ ಆಗಿದೆ. ಆದುದರಿಂದ ಅವರ ಆತ್ಮಚರಿತ್ರೆ ಓದಲು ಸಹಾಯವಾಯಿತು.

     ಬೆಸಿಗೆಯ ರಜೆಗೆ ಹೊಗುತ್ತಿದ್ದ ಎಲ್ಲಅಳಿಯಂದಿರರಿಗೆ   ಸೋದರ ಮಾವನೆಂದರೆ ಬಹಳ ಇಷ್ಟ.ಏಕೆಂದರೆ ಮುಂಜಾನೆ ಎಲ್ಲರಿಗೂ ಬಿಸಿಯಾದ ಪೂರಿಯನ್ನು ಹೊಟಲ್ಲಿನಲ್ಲಿ ಕೊಡಿಸುತ್ತಿದ್ದರು. ಪೂರಿಯ ಚಟ್ನಿಯ ಮೇಲೆ ಸಕ್ಕರೆಯ ಹಾಕಿಕೊಂಡು ತಿನ್ನುವುದೆಂದರೆ ಬಹಳ ಖುಷಿ ಹಾಗೂ ಸಂತಸದ  ವಿಷಯವಾಗಿತ್ತು. ಜೀವನಕ್ಕೆ ಒಂದು ಕೌಟುಂಬಿಕ ಸಂಬಂಧಗಳ ಪರಿಚಯ ಹಾಗೂ  ಭದ್ರತೆಯನ್ನು ನನ್ನವ್ವನ ಮನೆ  ನನಗೆ ಒದಗಿಸಿಕೊಟ್ಟಿತ್ತು ಎಂದು ಹೇಳಬಹುದು.
           ಬಿಸರಳ್ಳಿ ಎಂಬ ಊರಿನಲ್ಲಿ ಕೇವಲ ಆರು ವರ್ಷಗಳು ಇದ್ದ ಕಾರಣ ನೆನಪುಗಳು  ಬಹಳ ಕಡಿಮೆಯಿವೆ. ನನ್ನ ಬಾಲ್ಯ ಸ್ನೇಹಿತ ವಿಜಯ   ಎಂಬ ಸ್ನೇಹಿತ ಈಗಲೂ ಅಲ್ಲಿಯೇ ಇದ್ದಾನೆ.  ಬಿಸರಳ್ಳಿ ಎಂಬ ಊರು ಬಿಟ್ಟು ನನ್ನ ಸ್ವಂತ ಊರು ಹುನಗುಂದ ತಾಲೂಕಿನ  ಶಿವನಗುತ್ತಿ ಗೆ ಬಂದೆನು. ನನ್ನ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಶಿವನಗುತ್ತಿಯಲ್ಲಿಯೇ ಮುಗಿಯಿತು. ಹಾಗೂ  ಕಾಲೇಜ್ ಶಿಕ್ಷಣವನ್ನು ಇಲಕಲ್ಲಿನಲ್ಲಿ ಮುಗಿಸಿದೆ. ಶಿವನಗುತ್ತಿಯಲ್ಲಿ ಇದ್ದುಕೊಂಡು  ಕೃಷಿ ಕೆಲಸದ ಜೊತೆ ಶಿಕ್ಷಣವನ್ನು ಮುಗಿಸಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದು   ಅದೊಂದು ಹೋರಾಟದ ಜೀವನ ಅದನ್ನು ಮುಂದೆ ಎಂದಾದರೂ ವಿವರಿಸುವ ಪ್ರಯತ್ನ ಮಾಡುವೇನು.

     ನಮ್ಮ ಸೋದರ ಮಾವನ ಬಗ್ಗೆ ಪ್ರಸ್ತಾಪಿಸಿದ್ದೇನು. ಮನೆಯಲ್ಲಿನ ಎಲ್ಲ ಜವಾದ್ಬಾರಿಗಳನ್ನು ವಹಿಸಿಕೊಂಡು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದರು. ವಿಶ್ವನಾಥ್ ಮಾವನು ಎಲ್ಲ  ಕೌಟುಂಬಿಕ ಸಂಬಂಧಗಳನ್ನು ಗೌರವಿಸುತ್ತಿದ್ದರು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಇನ್ನೊಬ್ಬರು ಹೇಳುವ ಮಾತುಗಳಿಗೆ ಕಿವಿ ಕೊಡುತ್ತಿದ್ದರು .ಎಲ್ಲರನ್ನೂ ಮಾತನಾಡಿಸಬೇಕು, ಎಲ್ಲರೊಳಗೆ ಒಂದಾಗಿರಬೇಕು, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂಬ ಅವರ ಭಾವನೆ ಮತ್ತು ವರ್ತನೆಯಲ್ಲಿ ಕಂಡುಬರುತ್ತಿತ್ತು.
  ಇತರ ಕುಟುಂಬದ ಸದಸ್ಯರಲ್ಲಿ ಆಗುತ್ತಿದ್ದ ಸಣ್ಣಪುಟ್ಟ ಜಗಳಗಳ ಬಗೆಹರಿಸಲು ಹಿಂದೇಟು ಹಾಕುತ್ತಿರಲಿಲ್ಲ. ಸಲಹೆ ಸೂಚನೆಗಳನ್ನು ನೀಡಲು ಸದಾ ಉತ್ಸಾಹದ ಮುಕ್ತ ಮನಸ್ಸಿನ ಸಕಾರಾತ್ಮಕ ದೃಷ್ಠಿಕೊನ ಇರುವ ಒಬ್ಬಒಳ್ಳೆಯ ವ್ಯಕ್ತಿಯಾಗಿದ್ದರು.   
         ಲೋಕಾನುಭವದ ಪ್ರಕಾರ ಮನುಷ್ಯ ವೈವಾಹಿಕ ಜೀವನಕ್ಕೆ ಬದ್ಧನಾದ  ಮೇಲೆ ಮಾನಸಿಕವಾಗಿ ಸಂಕೀರ್ಣವಾಗುತ್ತಾ ಹೋಗುತ್ತಾನೆ. ಅಥವಾ ಬಾಹ್ಯ ಚಟುವಟಿಕೆಗಳು ಕಡಿಮೆಯಾಗುತ್ತವೆ.  ಆದರೆ ನನ್ನ ಮಾವ ವಿಶಾಲ ಹೃದಯದ ವ್ಯಕ್ತಿಯಾಗಿದ್ದರು.

    ಸಂಬಂಧಿಕರಲ್ಲಿ ಯಾರೇ ಹಣ ಕೇಳಲಿ ತನ್ನಲ್ಲಿರುವ ಹಣದಲ್ಲಿಯೇ ಸ್ವಲ್ಪನಾದರೂ ಕೊಡುತ್ತಿದ್ದರು. ಸಂಬಂಧಗಳನ್ನು ಜೀವಂತವಾಗಿರಿಸಿಕೊಂಡು ಅವುಗಳನ್ನು ಪಾಲಿಸುವ ಪೋಷಿಸುವ ಆತನ ಅಂತರ್ಗತ ಧೋರಣೆಯು ಶ್ಲಾಘನೀಯವಾದದ್ದು.

       ವೈಯಕ್ತಿಕವಾಗಿ ಅವರ ತತ್ವ-ಸಿದ್ಧಾಂತ ಗಳಲ್ಲಿ ಬಡವರ ಪರ, ಶೋಷಿತರ ಪರ, ಕೂಲಿಕಾರ್ಮಿಕರ ಪರವಾದ ಧೋರಣೆಗಳು ಇದ್ದವು. ಗ್ರಾಮೀಣ ಪರಿಸರವನ್ನು ಬಹಳಷ್ಟು ಇಷ್ಟಪಡುತ್ತಿದ್ದರು. ಯಾವುದೇ ಊರಿಗೆ ಹೋಗಲಿ ಊರಿನ ಪರಿಸರ, ಊರಿನ ಇತಿಹಾಸ ,ತನ್ನ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಹಿನ್ನೆಲೆ, ಆತನ ಆಸಕ್ತಿ, ಸುಖದುಃಖಗಳನ್ನು ವಿಚಾರಿಸಿ ಅವರೊಳಗೆ ಒಂದಾಗಿ ಬಿಡುವ ಸಹಜ ಸರಳ ವ್ಯಕ್ತಿಯಾಗಿದ್ದರು.

     ರಾಜ್ಯದಲ್ಲಿ ವಿಶ್ವನಾಥ್ ಮಾವನವರಿಗೆ ಸುಮಾರು ಐದು ಸಮ್ಮೇಳನಗಳಲ್ಲಿ ಬಾಗಿಯಾಗಿದ್ದೇನೆ .ಅವರ ಜೊತೆ ಕಾಲಕಳೆಯುವುದು ಎಂದರೆ ಬಹಳ ಖುಷಿಯ ವಿಷಯ.  ಮಾವನದು ಸದಾ ಜಾಗೃತ ಮನಸ್ಸು, ಚಡಪಡಿಕೆಯ ಮನಸ್ಸು, ತನಗೆ ಏನು ಅನಿಸುತ್ತದೆಯೋ ಅದನ್ನು ಮಾಡುವ ಸ್ವತಂತ್ರ ಸ್ವಭಾವದ ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದರು.

      ಸೈದ್ಧಾಂತಿಕವಾಗಿ ಕುಟುಂಬ ಸದಸ್ಯರೆಲ್ಲರೂ ಒಂದೇ ಪಕ್ಷವನ್ನು ಇಷ್ಟಪಡುತ್ತಿದ್ದರೆ, ಮಾವನು ಮಾತ್ರ ಕಾಂಗ್ರೆಸ್ಸ ಪಕ್ಷ  ಇಷ್ಟಪಡುತ್ತಿದ್ದರು.  ಕಾಂಗ್ರೆಸ್ಸಿನ ಮೂಲ ಸಿದ್ಧಾಂತಗಳು ಹಾಗೂ  ಧೋರಣೆಗಳು ಅವರಿಗೆ  ಇಷ್ಟವಾಗುತ್ತಿದ್ದವು. ಕಾಂಗ್ರೆಸ್ ಪರವಾದ ನಿಲುವು ಹಾಗೂ ಪ್ರೀತಿಯಿತ್ತು.

     ಊರಿಂದ ಊರಿಗೆ ಪ್ರವಾಸಕ್ಕೆ ಹೋದಾಗ ಅಥವಾ ಸಮ್ಮೇಳನಕ್ಕೆ ಹೋದಾಗ ಕಣ್ಣಿಗೆ ಕಂಡ ಯಾವುದೇ ಪುಸ್ತಕದಲ್ಲಿ ಅದು ಎಷ್ಟೇ ಬೆಲೆ ಆಗಿರರಲಿ ತೆಗೆದುಕೊಳ್ಳುತ್ತಿದ್ದರು. ಅವರಿಗೆ  ಲಂಕೇಶ್ ಅಂದರೆ ಬಹಳ ಇಷ್ಟದ ವ್ಯಕ್ತಿಯಾಗಿದ್ದರು.  ಅವರ  ಪತ್ರಿಕೆ ಹಾಗೂ ಸಾಹಿತ್ಯ  ಬಹಳ ಓದಿಕೊಂಡಿದ್ದರು.ಲಂಕೇಶರ ಬರವಣಿಗೆಯಲ್ಲಿರುವ ನೆರವಂತಿಕೆ ಹಾಗೂ ವಸ್ತುನಿಷ್ಠ ಧೋರಣೆಗಳಗಳನ್ನು  ಬಹಳ ಇಷ್ಠಪಡುತ್ತಿದ್ದರು.

            ಮನುಷ್ಯನಿಂದ ಮನುಷ್ಯನಿಗೆ  ಆಸಕ್ತಿಗಳು, ಹವ್ಯಾಸಗಳು, ತುಡಿತಗಳು, ಕುತೂಹಲಗಳು ,ಭಿನ್ನ-ಭಿನ್ನವಾಗಿರುತ್ತವೆ. ವ್ಯಕ್ತಿ ವ್ಯಕ್ತಿಗಳಲ್ಲಿ ಭಿನ್ನತೆ ಸಹಜವಾದದ್ದು ಅದನ್ನು ಎಲ್ಲರೂ ಗೌರವಿಸಲೇಬೇಕು. ವ್ಯಕ್ತಿಯಿಂದ  ವ್ಯಕ್ತಿಗಳಿಗೆ ಭಿನ್ನತೆಗಳು ಗುಣಮಟ್ಟದಲ್ಲಿ ಇದ್ದರೆ ಮಾತ್ರ  ಅಂತರ್ಗತ ಸಾಮರ್ಥ್ಯಗಳು ಗುಣಮಟ್ಟದಲ್ಲಿ  ಬಹಿರಂಗಗೊಳ್ಳುತ್ತದೆ ಎಂಬುದು ಮಾತ್ರ ಸತ್ಯವಾದದ್ದು.
           ನನಗೆ  ನನ್ನ ಮಾವ ಇಷ್ಟ ಏಕೆಂದರೆ ಅವರಿಗೆ ಸಮಕಾಲೀನ ಸಾಹಿತ್ಯ, ರಾಜಕೀಯ ಚಟುವಟಿಕೆಗಳು, ಹಾಗೂ ಶಿಕ್ಷಣಕ್ಷೇತ್ರದ ಚಟುವಟಿಕೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಆಸಕ್ತರೊಂದಿಗೆ ಸಕ್ರಿಯವಾಗಿ ಚರ್ಚಿಸುತ್ತಿದ್ದರು. ವೈಯಕ್ತಿಕವಾಗಿ ನಾನು ಸಮಯಸಿಕ್ಕಾಗ ಅವರಿಗೆ ಫೋನ್ ಮಾಡಿದಾಗ ರಾಜಕೀಯ ಸ್ಥಿತ್ಯಂತರಗಳ ಬಗ್ಗೆ, ಸಾಮಾಜಿಕ  ಬದಲಾವಣೆಗಳ ಬಗ್ಗೆ ಚರ್ಚಿಸುತ್ತಿದ್ದೆನು. ನನ್ನೊಳಗಿನ ಸಾಹಿತ್ಯ ಹಾಗೂ ರಾಜಕೀಯ ವಿಚಾರಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನನ್ನ ಕುಟುಂಬದಲ್ಲಿ  ಸೂಕ್ತವಾದ ವ್ಯಕ್ತಿಯಾಗಿದ್ದರು.

          ಸಾಮಾಜಿಕವಾಗಿ ಜನರೊಂದಿಗೆ ಬೆರೆತು ಬಾಳಬೆಕೆಂಬ ಹಂಬಲ ಅವರಲ್ಲಿತ್ತು. ಶಿಕ್ಷಕರಾಗಿ, ಶಿಕ್ಷಕರನ್ನು ಸಂಘಟಿಸುವ ಹಾಗೂ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಿದ್ದರು.  ಸಂಘಟನೆ ಅವರ ಬಲವಾದ ಆಸಕ್ತಿಯ ವಿಷಯವಾಗಿತ್ತು. ಸದಾ ಕ್ರಿಯಾಶೀಲತೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇತರರಿಗೂ ಒಳ್ಳೆಯದನ್ನು ಬಯಸುವ ಮಾನವೀಯತೆಯ  ವ್ಯಕ್ತಿಯಾಗಿದ್ದರು.

      2019 ಆಗಸ್ಟ್ ತಿಂಗಳಿನಲ್ಲಿ ಹೃದಯಾಘಾತದಿಂದ  ನಮ್ಮನ್ನೇಲ್ಲ ಅಗಲಿ ಹೋದರು. ಅವರ  ಅನೀರಿಕ್ಷಿತ ಸಾವು ಕುಟುಂಬದ ಎಲ್ಲಾ ಸದಸ್ಯರಿಗೂ  ಅದೊಂದು ದುಃಖದ ವಿಷಯವಾಗಿದೆ.  ದು:ಖಿತ  ಮನಸ್ಸನ್ನು ಶಾಂತಗೊಳಿಸಲು ಇಂದಿಗೂ ಸಾಧ್ಯವಾಗಿಲ್ಲ. ವ್ಯಕ್ತಿಗಳಲ್ಲಿಯೇ  ಸದಭಿರುಚಿಯ ವ್ಯಕ್ತಿಗಳು ಸಿಗುವುದು ವಿರಳ, ಸದಭಿರುಚಿಯ ಸಹೋದರ ಮಾವ ಇಲ್ಲದ ದಿನಗಳು ತುಂಬಾ ಬೇಸರವೆನಿಸುತ್ತದೆ.
                                                                                           ಮಹೇಶ ಶೆಟ್ಟರ.